Pages

Wednesday, December 28, 2011

ಗುರುಕಿರಣ್ ಆಪ್ತಮಿತ್ರನಿಗೆ 'ಆರಕ್ಷಕ' ನಾಯಕ ಪಟ್ಟ

ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಸೂಪರ್ ಸ್ಟಾರ್ ಉಪೇಂದ್ರ ಒಂದಾಗಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದಾರೆ. ಅವು ಎ, ಉಪೇಂದ್ರ, ಗೋಕರ್ಣ ಹಾಗೂ ಕುಟುಂಬ. ರವಿಚಂದ್ರನ್-ಹಂಸಲೇಖ ಜೋಡಿಯಂತೆ ಒಂದು ಕಾಲದಲ್ಲಿ ಯಶಸ್ವಿ ಜೋಡಿ ಎನಿಸಿಕೊಂಡಿತ್ತು ಈ ಜೋಡಿ.

ಆರಕ್ಷಕ ಚಿತ್ರಕ್ಕೆ ಉಪೇಂದ್ರ ನಾಯಕರಾಗಲು ಅವರ ಮಿತ್ರ ಗುರುಕಿರಣ್ ಕಾರಣ ಎನ್ನುವ ಗುಟ್ಟು ರಟ್ಟಾಗಿದೆ. ನಿರ್ದೇಶಕ ಪಿ ವಾಸು ಅವರಿಗೆ ಪ್ರತ್ಯಕ್ಷವಾಗಿ ಉಪೇಂದ್ರ ಪರಿಚಯ ಇರಲಿಲ್ಲವಂತೆ. ವಾಸು ತಮ್ಮ ಚಿತ್ರಕ್ಕೆ ನಾಯಕನನ್ನು ಸೂಚಿಸಿ ಎಂದಾಗ 'ಒನ್ ಅಂಡ್ ಓನ್ಲೀ' ಉಪೇಂದ್ರರ ಹೆಸರನ್ನು ಸೂಚಿಸಿದರಂತೆ ಗುರುಕಿರಣ್.

ನಂತರ ಉಪೇಂದ್ರರನ್ನು ಭೇಟಿಯಾದ ಪಿ ವಾಸು ಅವರಿಗೆ ಉಪೇಂದ್ರ ತಮ್ಮ ಚಿತ್ರಕ್ಕೆ ಅತ್ಯಂತ ಸೂಕ್ತವಾದ ಆಯ್ಕೆ ಎನಿಸಿತಂತೆ. ಇದೀಗ ಚಿತ್ರೀಕರಣ ಹಂತದಲ್ಲಿರುವ ಆರಕ್ಷಕ ಚಿತ್ರದಲ್ಲಿ ಉಪೇಂದ್ರ, ಸದಾ ಹಾಗೂ ರಾಗಿಣಿ ಜೋಡಿ ಸಖತ್ ಮೋಡಿ ಮಾಡಲಿದೆಯಂತೆ. ಪಿ ವಾಸು ತುಂಬಾ ಖುಷಿಯಾಗಿದ್ದಾರೆ, ಪ್ರತಿ ಕ್ಷಣ ಗುರುಕಿರಣ್ ನೆನಪಾಗುತ್ತಾರಂತೆ

No comments:

Post a Comment