Pages

Sunday, December 11, 2011

ಕಲ್ಪನಾ 'ಉಪ್ಪಿ'ಗೆ ಜತೆ ಬೆಳಗಾವಿ ಬೆಡಗಿ ಲಕ್ಷ್ಮೀ ರೈ

Lakshmi Rai

ತಮಿಳು, ತೆಲುಗಿನಲ್ಲಿ ಸೂಪರ್ ಹಿಟ್ ಆದ ಚಿತ್ರ ಕಾಂಚನಾ, ಕನ್ನಡಕ್ಕೆ 'ಕಲ್ಪನಾ' ಆಗಿ ಬರುತ್ತಿದೆ. ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ನಾಯಕ, ಡೈಲಾಗ್ ಕಿಂಗ್ ಸಾಯಿಕುಮಾರ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೆಲ್ಲಾ ಜಗಜ್ಜಾಹೀರಾಗಿ ಸಾಕಷ್ಟು ಕಾಲವಾಯ್ತು. ಹೊಸ ಸುದ್ದಿ, ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಬೆಳಗಾವಿ ಬೆಡಗಿ ಲಕ್ಷ್ಮೀ ರೈ.

ಇನ್ನೊಂದು ವಿಶೇಷವೆಂದರೆ ಮೂಲ ಚಿತ್ರ ಕಾಂಚನಾದಲ್ಲಿ ಅಭಿನಯಿಸಿದ್ದ ಮಂಗಳಮುಖಿ ಪ್ರಿಯಾ, ಕನ್ನಡದ ಕಲ್ಪನಾದಲ್ಲೂ ಇದ್ದಾರೆ. ಖ್ಯಾತ ಸಾಹಿತಿ ರಾಮ್ ನಾರಾಯಣ್ ಈ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು. ಶ್ರುತಿ, ಉಮಾಶ್ರೀ, ಸಾಧು ಕೋಕಿಲ, ಶೋಭರಾಜ್ ಮುಂತಾದವರು ಈ ಚಿತ್ರದಲ್ಲಿರುವ ಉಳಿದ ಪ್ರಮುಖರು.

ಇದೇ ಡಿಸೆಂಬರ್ 14 ರಂದು ಮುಹೂರ್ತ. ದೀಪ ಬೆಳಗಿಸುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಿರುವ ರಾಘವ ಲಾರೆನ್ಸ್ ಪ್ರಮುಖ ಆಕರ್ಷಣೆ. ಬಾಲಿವುಡ್ ನಲ್ಲಿ ಈ ಚಿತ್ರವನ್ನು 'ಶಾರುಖ್ ಖಾನ್' ನಾಯಕತ್ವದಲ್ಲಿ ಇದೇ ರಾಘವ ಲಾರೆನ್ಸ್ ನಿರ್ದೇಶಿಸಲಿದ್ದಾರೆ. ಅವರ ಕಣ್ಣೇನಾದರೂ ಕನ್ನಡದ ಬೆಡಗಿ ಲಕ್ಷ್ಮೀ ರೈ ಮೇಲೆ ಬಿದ್ದರೆ ಈಕೆ ಹಿಂದಿಗೂ ನಾಯಕಿ ಆದರೆ ಅಚ್ಚರಿಯೇನಿಲ್ಲ. (ಒನ್ ಇಂಡಿಯಾ ಕನ್ನಡ)

No comments:

Post a Comment