Pages

Thursday, December 8, 2011

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಸೂಪರ್'


Upendra


ಡಿಸೆಂಬರ್ 15, 2011 ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉಪೇಂದ್ರ ನಟನೆ ಹಾಗೂ ನಿರ್ದೇಶನದ 'ಸೂಪರ್' ಚಿತ್ರ ಪ್ರದರ್ಶನವಾಗಲಿದೆ. ಈ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಕಮರ್ಷಿಯಲ್ ಚಿತ್ರವಾಗಿದ್ದರೂ, ಪ್ರಸಕ್ತ ರಾಜಕೀಯ ವ್ಯವಸ್ಥೆಯನ್ನು ರಿಪೇರಿ ಮಾಡಲು ಯುವ ಜನತೆಯನ್ನು ಈ ಮೂಲಕ ಉಪ್ಪಿ ಹುರಿದುಂಬಿಸಿದ್ದರು.

ಈ ಚಿತ್ರವಲ್ಲದೇ, ಪ್ರದರ್ಶನವಾಗುತ್ತಿರುವ ಉಳಿದ ಚಿತ್ರಗಳೆಂದರೆ ಪುಟ್ಟಕ್ಕನ ಹೈವೇ. ಬೆಟ್ಟದ ಜೀವ, ನನ್ನ ಗೋಪಾಲ, ಗಾಂಧಿ ಸ್ಮೈಲ್ಸ್, ಹೆಜ್ಜೆಗಳು, ಪ್ರಾರ್ಥನೆ, ಶಬ್ಧಮಣಿ, ಒಲವೇ ಮಂದಾರ, ಚಿಂಟು ಸ್ಕೂಲ್ ಮುಂತಾದವು. 2009-10ನೇ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿರುವ 'ರಸಋಷಿ ಕುವೆಂಪು' ಮತ್ತು ತುಳು ಚಿತ್ರ 'ಗಗ್ಗರ' ವಿಶ್ವ ಸಿನಿಮಾ ವಿಭಾಗದಲ್ಲಿ ಸ್ಥಾನ ಪಡೆದಿವೆ.

ಡಿಸೆಂಬರ್ 15ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಓಂಪುರಿ, ಅನಂತ್‌ನಾಗ್ ಮತ್ತು ದರುಯಿಶ್ ಮೆಹ್ರ್‌ಜುಯಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈ ಚಿತ್ರೋತ್ಸವವನ್ನು ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸುತ್ತಿದೆ

No comments:

Post a Comment