Pages

Saturday, December 3, 2011

ಕಲ್ಪನಾ ಹಾರರ್ ನಲ್ಲಿ 'ಡೈಲಾಂಗ್ ಕಿಂಗ್' ಗಮ್ಮತ್ತು .....ಹಿಂದಿಯಲ್ಲಿ ಶಾರುಕ್ ಖಾನ್ ಮತ್ತು ಸಂಜಯ್ ದತ್

Upendra Saikumar



 ಈ ಕಾಂಚನಾ ತಮಿಳು-ತೆಲುಗಿನಲ್ಲಿ ಜಯಭೇರಿ ಬಾರಿಸಿತ್ತು. 'ನಪುಂಸಕ ಸ್ತ್ರೀ' ಪಾತ್ರದಲ್ಲಿ ಶರತ್ ಕುಮಾರ್ ನಟನೆಯಂತೂ ಭಾರೀ ಪ್ರಶಂಸೆಗೆ ಕಾರಣವಾಗಿತ್ತು. ಭಾರೀ ಮೊತ್ತ ನೀಡಿರುವ ಸಹರಾ ವನ್ ಮೋಶನ್ ಪಿಕ್ಚರ್ಸ್ ಈ ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸುತ್ತಿದೆ. ಹಿಂದಿಯಲ್ಲಿ ಸ್ವತಃ ಲಾರೆನ್ಸ್ ನಿರ್ದೇಶನ ಮಾಡುವ ಸಾಧ್ಯತೆಗಳಿವೆ. ನಾಯಕಿ ಸೇರಿದಂತೆ ಇತರ ಪಾತ್ರಗಳ ಆಯ್ಕೆ, ಶೀರ್ಷಿಕೆ ಶೀಘ್ರದಲ್ಲೇ ಹೊರ ಬೀಳಲಿದೆ.

ಚಿತ್ರದಲ್ಲಿ ನಟಿಸುವ ಒಪ್ಪಂದಕ್ಕೆ ಸಾಯಿ ಕುಮಾರ್ ಈಗಾಗಲೇ ಸಹಿ ಹಾಕಿದ್ದಾರೆ. ಡಿಸೆಂಬರ್ 14ರಂದು ಚಿತ್ರದ ಮುಹೂರ್ತ ನಡೆಯಲಿದೆ. ಈ ನಡುವೆ ಕಾಂಚನಾ ಚಿತ್ರ ಬಾಲಿವುಡ್‌ನಲ್ಲೂ ಸದ್ದು ಮಾಡುತ್ತಿದೆ. ಆರಂಭದಲ್ಲಿ ಸಲ್ಮಾನ್ ಖಾನ್ ನಾಯಕರಾಗಲಿದ್ದಾರೆ ಎಂದು ಹೇಳಲಾಗಿದ್ದ ಜಾಗಕ್ಕೀಗ ಶಾರೂಖ್ ಖಾನ್ ಬಂದಿದ್ದಾರೆ. ಶರತ್ ಕುಮಾರ್ ಪಾತ್ರ ಸಂಜಯ್ ದತ್ ಮಡಿಲಿಗೆ ಬಿದ್ದಿದೆ.

ಆ ಪಾತ್ರವನ್ನು ಸಾಯಿ ಕುಮಾರ್ ಕನ್ನಡದಲ್ಲಿ ಹೇಗೆ ನಿರ್ವಹಿಸಲಿದ್ದಾರೆ ಅನ್ನುವುದನ್ನು ಕಾದು ನೋಡಬೇಕು. ಈ ಚಿತ್ರದ ನಿರ್ದೇಶಕರು ಖ್ಯಾತ ಗೀತಸಾಹಿತಿ ರಾಮ್ ನಾರಾಯಣ್. ಒಟ್ಟಿನಲ್ಲಿ ಪೊಲೀಸ್ ಪಾತ್ರಗಳ 'ಗತ್ತು' ತೋರಿಸಿದ್ದ ಸಾಯಿಕುಮಾರ್ ಈಗ 'ಖೋಜಾ' ಪಾತ್ರದ 'ಗಮ್ಮತ್ತು' ತೋರಿಸಲಿದ್ದಾರೆ. ಈಗಲೇ ಕಲ್ಪನೆ ಬೇಡ, ನಿಮ್ಮ ಕಲ್ಪನೆ 'ಹಾರರ್...' ಆದ್ರೆ ಕಷ್ಟ! (ಒನ್ ಇಂಡಿಯಾ ಕನ್ನಡ)

No comments:

Post a Comment