Pages

Friday, October 14, 2011

'ಉಪ್ಪಿ'ನ ಕಾಯಿಗೆ ಅಂಬರೀಷ್, ರಮ್ಯಾ ಗರಂ ಮಸಾಲೆ!

ಇದೇನು, ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ರಮ್ಯಾ ಗರಂ ಮಸಾಲೆ ಜಾಹೀರಾತಿನಲ್ಲೇನಾದರೂ ಕಾಣಿಸಿಕೊಳ್ಳುತ್ತಿದ್ದಾರಾ ಅಂತ ನೋಡುತ್ತಿದ್ದೀರಾ? ಸುದ್ದಿ ಅದಲ್ಲ. ಇವರಿಬ್ರೂ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೂ ಭ್ರಷ್ಟಾಚಾರದ ಮಹತ್ವವನ್ನು ಸಾರುವ ಚಿತ್ರದಲ್ಲಿ.

ಹಾಗೆಂದು ಇದು ಉಪ್ಪಿ ಮತ್ತು ನಿರ್ದೇಶಕ ಪ್ರೇಮ್ ನಟಿಸಬೇಕಿದ್ದ, ಪ್ರಸಕ್ತ ನೆನೆಗುದಿಗೆ ಬಿದ್ದಿರುವ 'ಗಾಂಧಿನಗರ ಮಹಾತ್ಮೆ' ಅಂತ ತಿಳಿದುಕೊಳ್ಳಬೇಕಾಗಿಲ್ಲ. ಇದು ಅಪ್ಪಟ ಸ್ವಮೇಕ್. ಅದರಲ್ಲೂ ಈ ಹಿಂದೆ ಅತ್ಯುತ್ತಮ ಕಥೆಗಾರ ಅಂತ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ನಿರ್ಮಾಪಕ ಮುನಿರತ್ನ ಅವರೇ ಬರೆದಿರುವ ಕಥೆ. ಇನ್ನೂ ಹೆಸರಿಡದ ಈ ಚಿತ್ರದ ನಿರ್ಮಾಣದ ಹೊಣೆಯೂ ಮುನಿರತ್ನ ಅವರದ್ದು.

ಭ್ರಷ್ಟಾಚಾರ, ಅನಾಚಾರ, ವ್ಯವಸ್ಥೆಯಲ್ಲಿನ ಲೋಪಗಳ ವಿರುದ್ಧ ಉಪ್ಪಿ ತನ್ನ ಸಿನಿಮಾಗಳಲ್ಲಿ ಸಂದೇಶ ನೀಡುತ್ತಾ ಬಂದಿರುವುದು ಹೊಸತೇನಲ್ಲ. ಅವರ ನಿರ್ದೇಶನದ ಬಹುತೇಕ ಎಲ್ಲಾ ಚಿತ್ರಗಳಲ್ಲೂ ಇಂತಹ ಅಂಶಗಳಿವೆ. ಆದರೆ ಈ ಬಾರಿ ಹೊಸ ಮಾರ್ಗದಲ್ಲಿ ಇದನ್ನು ವಿವರಿಸಲಾಗುತ್ತಿದೆ. ಹಾಗೆ ವಿವರಿಸುವ ಕ್ಯಾಪ್ಟನ್ ಸಾಧು ಕೋಕಿಲಾ.

ನಿರ್ದೇಶನದೊಂದಿಗೆ ಸಂಗೀತ ನೀಡುವ ಹೊಣೆಯೂ ಕೋಕಿಲಾ ಅವರದ್ದು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಚಿತ್ರ ಅಂದ ಕೂಡಲೇ ಸೀರಿಯಸ್ ಸಿನಿಮಾ ಅಂತ ಯಾರೂ ತಿಳಿದುಕೊಳ್ಳಬೇಕಾಗಿಲ್ಲ, ಯಾಕೆಂದರೆ ಇಲ್ಲಿ ಹಾಸ್ಯದ ಮೂಲಕ ಎಲ್ಲವನ್ನೂ ಹೇಳುವ ಯತ್ನ ನಡೆಯಲಿದೆ. ವ್ಯವಸ್ಥೆಯಿಂದ ರೋಸಿ ಹೋದ ಉಪೇಂದ್ರ ಯಮರಾಜನ ಬಳಿ ಹೋಗುತ್ತಾರಂತೆ. ಅಲ್ಲಿ ಯಮರಾಜನಿಗೆ ದೂರು ನೀಡುತ್ತಾರಂತೆ.

ಮೂಲಗಳ ಪ್ರಕಾರ, ಸಿನಿಮಾದಲ್ಲಿ ಯಮನ ಪಾತ್ರ ಮಾಡುತ್ತಿರುವುದು ಅಂಬರೀಷ್. ಅದೇ ಕಾರಣದಿಂದ ಚಿತ್ರಕ್ಕೆ 'ಯಮೇಂದ್ರ ಉಪೇಂದ್ರ' ಅಂತ ಹೆಸರಿಡಲಾಗಿದೆ. ಇದು ಇನ್ನಷ್ಟೇ ಖಚಿತವಾಗಬೇಕಿದೆ. ಅತ್ಯುತ್ತಮ ಶೀರ್ಷಿಕೆ ಬೇರೆ ಏನಾದರೂ ಸಿಕ್ಕಿದಲ್ಲಿ, ಬದಲಾಯಿಸುವ ಸಾಧ್ಯತೆಗಳೂ ಇವೆಯಂತೆ

No comments:

Post a Comment