Pages
▼
Wednesday, September 21, 2011
thakadhimi thoom
ಎ, ಉಪೇಂದ್ರ ಮುಂತಾದ ಚಿತ್ರಗಳಲ್ಲಿ ವಿಚಿತ್ರವಾಗಿ ಕುಣಿದಿದ್ದನ್ನೇ ಲೇವಡಿ ಮಾಡಿದ್ದವರಿಗೆ ಶಾಕ್ ನೀಡುವ ಸುದ್ದಿಯಿದು. ರಿಯಲ್ ಸ್ಟಾರ್ ಉಪೇಂದ್ರ ಭರತನಾಟ್ಯ ಪ್ರವೀಣರಾಗಿದ್ದಾರೆ. ಆಶ್ಚರ್ಯ ಆಗುತ್ತಿದೆಯೇ..? ಆದರೆ ನಿಜ. ಉಪ್ಪಿ ತನ್ನ ಹೊಸ ಚಿತ್ರದಲ್ಲಿ ಭರತನಾಟ್ಯ ಮಾಡುತ್ತಿದ್ದಾರೆ. ಅದಕ್ಕಾಗಿ ಪ್ರತಿದಿನ ಒಂದು ಗಂಟೆ ನೃತ್ಯಾಭ್ಯಾಸವನ್ನೂ ಮಾಡುತ್ತಿದ್ದಾರಂತೆ!
ಶಾಸ್ತ್ರೀಯ ನೃತ್ಯ ಕಲಿಯುವುದು ಅಂದರೆ ಅಷ್ಟು ಸುಲಭವಲ್ಲ. ಅದಕ್ಕೆ ಅವಿರತ ಶ್ರಮದ ಅಗತ್ಯವಿದೆ. ಅದನ್ನು ಮನದಟ್ಟು ಮಾಡಿಕೊಂಡಿರುವ ಉಪ್ಪಿ, ಪ್ರತಿದಿನ ಬೆಳಗ್ಗೆ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಅವರ ಪತ್ನಿ ಪ್ರಿಯಾಂಕಾ ಅವರೇ ಹೇಳುವ ಪ್ರಕಾರ, ಉಪ್ಪಿ ಈಗ ಭರತನಾಟ್ಯ ಪ್ರವೀಣ. ಇಷ್ಟು ತ್ವರಿತವಾಗಿ ನಾಟ್ಯ ಕಲಿತಿರುವುದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೆ, ಉಪ್ಪಿ ಹೀಗೆ ಹೊಸ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದು 'ಗಾಡ್‌ಫಾದರ್'ನಲ್ಲಿ. ಕೌಟುಂಬಿಕ ಕಲಹದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಾಲ್ಕಾರು ವಿಭಿನ್ನ ಗೆಟಪ್‌ಗಳಲ್ಲಿ ಉಪ್ಪಿ ಮಿಂಚಲಿದ್ದಾರೆ. ಅದರಲ್ಲಿ ಭರತನಾಟ್ಯದ್ದು ಪ್ರಮುಖ ತಿರುವಂತೆ.
ಜಯಮಾಲಾ ಪುತ್ರಿ ಸೌಂದರ್ಯ ನಾಯಕಿಯಾಗಿರುವ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಶ್ರೀರಾಮ್. ಜನಪ್ರಿಯ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ಮೂಲಕ ಕನ್ನಡಕ್ಕೆ ಬರುತ್ತಿರುವುದು ಗೊತ್ತೇ ಇದೆ. ಗಾಡ್‌ಫಾದರ್‌ಗೆ ಉಪ್ಪಿ ಸಂಭಾಷಣೆ ಬರೆದಿರುವುದು ವಿಶೇಷ.
ಅಂದ ಹಾಗೆ, 'ಗಾಡ್‌ಫಾದರ್' ತಮಿಳಿನ 'ವರಲಾರು' ಚಿತ್ರದ ರಿಮೇಕ್. ಅಲ್ಲಿ ಅಜಿತ್ ಕುಮಾರ್, ಆಸಿನ್ ನಟಿಸಿದ್ದರು. ಕೆ.ಎಸ್. ರವಿಕುಮಾರ್ ನಿರ್ದೇಶನದ ಆ ಚಿತ್ರ 2006ರಲ್ಲಿ ಬಿಡುಗಡೆಯಾಗಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸಿತ್ತು. ಮೂಲ ಚಿತ್ರಕ್ಕೂ ರೆಹಮಾನ್ ಸಂಗೀತ ನೀಡಿದ್ದರು
No comments:
Post a Comment